ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು

  ಗುಂಡಾಲ ಹೆಸರುಪದ

   (<ದೇ. ಗುಂಡು) ಬಾಯಿ ಅಗಲವಾದ ದುಂಡಾದ ಪಾತ್ರೆ

  ಗುಂಡಿ ಹೆಸರುಪದ

   (ದೇ) ೧ ಗುಂಡಾಗಿರುವ ದೊಡ್ಡದಾದ ಪಾತ್ರೆ ೨ ಬಿಲ, ಡೊಗರು, ಗುಣಿ ೩ ಬಿರಡೆ, ಗುಬ್ಬಿ ೪ ಯಂತ್ರ ಮೊ.ವನ್ನು ನಡೆಸಲು ಒತ್ತುವ ಗುಬುಟು ೫ (ಆಲಂ) ದುಷ್ಟೆ, ನೀಚ ಸ್ತ್ರೀ

  ಗುಂಡಿಗೆ ಹೆಸರುಪದ

   (<ಸಂ. ಕುಂಡಿಕಾ) ನೀರಿನ ಪಾತ್ರೆ; (ದೇ) ೧ ಎದೆ, ಹೃದಯ ೨ ಧೈರ್ಯ

  ಗುಂಡು ಹೆಸರುಪದ

   (ದೇ) ೧ ಗುಂಡುಕಲ್ಲು ೨ ತುಪಾಕಿಯ ಗೋಲಿ ೩ ಸರಕ್ಕೆ ಹಾಕಿಕೊಳ್ಳುವ ಗೋಳಾಕಾರದ ಚಿನ್ನದ ಮಣಿ ೪ ಗುಂಪು, ಸಮೂಹ ೫ (ಆಲಂ) ಮದ್ಯ, ಶೆರೆ

  ಗುಂಡುಕೋ(ಗೋ)ವಿ ಹೆಸರುಪದ

   (ಆಲಂ) ಯಾವ ಕಟ್ಟು ಪಾಡೂ ಇಲ್ಲದವನು, ಏಕಾಂಗಿ

  ಗುಂಡುಹಾಕು ಎಸಕಪದ

   = (ಆಲಂ) ಮದ್ಯಪಾನ ಮಾಡು

  ಗುಂಪು ಹೆಸರುಪದ

   (ದೇ) ರಾಶಿ, ಸಮೂಹ

  ಗುಂಪುಕಟ್ಟು ಎಸಕಪದ

   ಒಳಗಿಂದೊಳಗೇ ಪಂಗಡ ಕಟ್ಟು

  ಗುಂಫ ಹೆಸರುಪದ

   (ಸಂ) ಜೋಡಣೆ, ರಚನೆ

  ಗುಂಬ(ಭ) ಹೆಸರುಪದ

   (?) ೧ ವಾಹನಗಳ ಚಕ್ರದ ನಡುವಿನ ಗಡ್ಡೆ ೨ ಗುಟ್ಟು, ರಹಸ್ಯ

  ಗುಂಬಜು ಹೆಸರುಪದ

   (<ಪಾರ. ಗುಂಬದ್) ಅರ್ಧಗೋಳಾ ಕಾರದ ಗೋಪುರದಂತಹ ರಚನೆ

  ಗುಕ್ಕ ಹೆಸರುಪದ

   (ದೇ) ಉಗ್ಗುತ್ತಾ ಮಾತನಾಡುವವನು

  ಗುಕ್ಕು ಹೆಸರುಪದ

   (ದೇ) ೧ ತುತ್ತು ೨ ಹಂಗು ೩ ಎದೆಯ ಬಡಿತ

  ಗುಗ್ಗ(ಗ್ಗು)ರಿ ಹೆಸರುಪದ

   (ದೇ) ಕಾಳುಗಳನ್ನು ಬೇಯಿಸಿ, ಒಗ್ಗರಿಸಿ ತಯಾರಿಸುವ ಒಂದು ಬಗೆಯ ತಿನಿಸು

  ಗುಗ್ಗು ಹೆಸರುಪದ

   (<ಹಿಂ. ಘುಗ್ಘೂ) ದಡ್ಡ, ಗಾವಿಲ, ಎಗ್ಗ

  ಗುಗ್ಗುಲ(ಳ) ಹೆಸರುಪದ

   (ಸಂ) ಧೂಪಕ್ಕೆ ಉಪಯೋಗಿಸುವ ಒಂದು ಬಗೆಯ ಅಂಟು, ಲೋಬಾನ

  ಗುಗ್ಗೆ ಹೆಸರುಪದ

   (ದೇ) ಕಿವಿಯೊಳಗಿನ ಮಲ

  ಗುಚ್ಛ ಹೆಸರುಪದ

   (ಸಂ) ೧ ಗೊಂಚಲು, ಕುಚ್ಚು ೨ ಪೊದೆ ೩ ಮೂವತ್ತೆರಡು ಯಾ ಎಪ್ಪತ್ತು ಎಳೆಗಳುಳ್ಳ ಮುತ್ತಿನ ಹಾರ

  ಗುಜರಿ ಹೆಸರುಪದ

   (<ಪಾರ. ಹಿಂ. ಮರಾ. ಗುಜರೀ) ೧ ಸಂಜೆ ವೇಳೆಯಲ್ಲಿ ವ್ಯಾಪಾರ ಮಾಡುವ ಅಂಗಡಿ ೨ ಚಿಕ್ಕ ವ್ಯಾಪಾರ, ಚಿಲ್ಲರೆ ವ್ಯಾಪಾರ ೩ ಹಳೆಯ ಸಾಮಾನುಗಳನ್ನು ಮಾರುವ ಸ್ಥಳ

  ಗುಜ್ಜು ಹೆಸರುಪದ

   (ದೇ) ೧ ಕುಳ್ಳಾಗಿರುವಿಕೆ, ಗಿಡ್ಡಾಗಿರುವಿಕೆ ೨ ಕುಳ್ಳ, ಗಿಡ್ಡ ೩ ಮೋಟು ಕಂಬ

ಈ ತಿಂಗಳ ನಿಘಂಟು ಬಳಕೆ : 15998