ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ದಾಸ ಸಾಹಿತ್ಯ ನಿಘಂಟು

  ಪಥಿಕ -

   ದಾರಿಗ, ದಾರಿಹೋಕ

  ಪದ -

   ಕಾಲುಭಾಗ; ಕಾಲು, ಪಾದ; ಮೋಕ್ಷ

  ಪದತೋಯ -

   ಪಾದದ ನೀರು, ಪಾದೋದಕ; ಉಂಗುಷ್ಟದಲಿ ಜನಿಸಿದ ಗಂಗೆ

  ಪದನಖ -

   ಪಾದದ ಉಗುರು, ಕಾಲುಗುರು

  ಪದನಳಿನ, ಪದಪದುಮ -

   ಪಾದಪದ್ಮ, ಪಾದ ಎನ್ನುವ ಕಮಲ

  ಪದಪಾಂಶು(ಸು) -

   ಪಾದಧೂಳಿ

  ಪದಯುಗ -

   ಪಾದದ್ವಯ, ಎರಡು ಪಾದಗಳು

  ಪದರ -

   ಒಂದಾದಮೇಲೆ ಒಂದು, ಪೊರೆ

  ಪದರಜ -

   ಪದಧೂಳಿ

  ಪದರಾಗಿ -

   ಶ್ರೀಚರಣದಲ್ಲಿ ಪ್ರೀತಿ ಇರುವವನು

  ಪದವಾರಿಜ -

   ಪಾದಕಮಲ

  ಪದವಿ -

   ಅಧಿಕಾರಸ್ಥಾನ, ಮುಕ್ತಿ, ಸುಖ ಕಡಿಮೆಯಾಗದ ಸ್ಥಾನ

  ಪದಾತಿ -

   ಕಾಲಾಳು, ನಡೆದಾಡುವವ, ಸೇನೆಯಲ್ಲಿ ಕಾಲಾಳಿನ ಪಡೆ

  ಪದಾಬ್ಜ -

   ಪಾದಕಮಲ

  ಪದಾಬ್ಜಭೃಂಗಳೆ -

   ಚರಣಗಳೆಂಬ ತಾವರೆಯಲ್ಲಿ ಸುಳಿದಾಡುವ ದುಂಬಿ

  ಪದುಮಕರ -

   ಪದ್ಮದಂತಹ ಕೈ

  ಪದುಮಕಲ್ಪ -

   ಜಗತ್ತಿನ ಕೊನೆಗಾಲ, ಒಂದು ಕಾಲಾವಧಿ

  ಪದುಮಗರ್ಭ -

   ವಿಷ್ಣು

  ಪದುಮಜ -

   ಬ್ರಹ್ಮ

  ಪದುಮಜಾಂಡ -

   ಬ್ರಹ್ಮಾಂಡ

ಈ ತಿಂಗಳ ನಿಘಂಟು ಬಳಕೆ : 24132