ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು

  ಹಡಿಕೆನಾತ ಹೆಸರುಪದ

   ಹೊಲಸು ವಾಸನೆ, ದುರ್ಗಂಧ

  ಹಡಿಕೆನಾಱು ಎಸಕಪದ

   (ದೇ) ದುರ್ಗಂಧವನ್ನು ಬೀರು, ದುರ್ವಾಸನೆಯನ್ನು ಹೊರಸೂಸು

  ಹಡಿಲು ಹೆಸರುಪದ

   (<ದೇ. ಪಡಿಲ್) ಸಸ್ಯ ಬೆಳೆಯದ ಭೂಮಿ, ಬೀಳುನೆಲ

  ಹಡಿಲುಬೀಳು ಎಸಕಪದ

   = ಬಂಜರಾಗು, ಬೀಳಾಗು

  ಹಡು ಎಸಕಪದ

   (<ದೇ. ಪಡು) ಸಂಭೋಗಿಸು, ರಮಿಸು

  ಹಡುಕು(ವು) ಹೆಸರುಪದ

   (<ದೇ. ಪಡುಕು) ೧ ಅಮೇಧ್ಯ, ಮಲ ೨ ದುರ್ಗಂಧ

  ಹಡೆ ಹೆಸರುಪದ

   (<ದೇ. ಪಡೆ) ೧ ಸೈನ್ಯ, ದಂಡು ೨ ವಂಶ, ಬಳಗ

  ಹಡೆ ಎಸಕಪದ

   (<ದೇ. ಪಡೆ) ೧ ಹೊಂದು, ಪಡೆ ೨ ಗಳಿಸು, ಸಂಪಾದಿಸು ೩ (ದಾನ ಮೊ.ವನ್ನು) ಸ್ವೀಕರಿಸು, ತೆಗೆದುಕೊಳ್ಳು ೪ ಪ್ರಸವಿಸು ೫ ಸಮರ್ಥವಾಗು, ಸಾಧ್ಯವಾಗು ೬ ದೊರಕು, ಲಭಿಸು

  ಹಣ ಹೆಸರುಪದ

   (<ಸಂ. ಪಣ) ಒಂದು ನಾಣ್ಯ, ನಾಲ್ಕು ಹಾಗ

  ಹಣ(ಣಿ)ಕು ಎಸಕಪದ

   (ದೇ) ಇಣಕಿ ನೋಡು, ಮರೆಯಲ್ಲಿ ನಿಂತು ನೋಡು

  ಹಣಕಾಸು ಹೆಸರುಪದ

   ದ್ರವ್ಯರೂಪದ ವರಮಾನ, ಆದಾಯ

  ಹಣಜೆ ಹೆಸರುಪದ

   (ದೇ) ಒಂದು ಬಗೆಯ ಹುಲ್ಲು

  ಹಣತೆ ಹೆಸರುಪದ

   (<ದೇ. ಪಣತಿ <ಸಂ. ಪ್ರಣತಿ) ೧ ಮಣ್ಣಿನ ಯಾ ಲೋಹದ ದೀಪದ ಬಟ್ಟಲು, ಸೊಡರು ೨ ಆ ಬಟ್ಟಲಿನಲ್ಲಿ ಹಚ್ಚಿಟ್ಟ ಜ್ಯೋತಿ, ದೀಪ

  ಹಣಾಹಣಿ ಹೆಸರುಪದ

   (<ದೇ. ಸಂಘ) ೧ ಹಣೆಯಿಂದ ಹಣೆಗೆ ಹೊಡೆದು ಮಾಡುವ ಜಗಳ ೨ ದೊಡ್ಡ ಜಗಳ, ಮಾರಾಮಾರಿ

  ಹಣಿ ಎಸಕಪದ

   (<ದೇ. ಪಣಿ) ೧ ಬಾಗು, ಮಣಿ ೨ ತೃಪ್ತವಾಗು, ತುಷ್ಟಿಹೊಂದು ೩ ಹೊಡೆ, ಬಡಿ ೪ ಹರಿತಮಾಡು, ಚೂಪುಗೊಳಿಸಲು - ತಟ್ಟು, ಬಡಿ ೫ ಕತ್ತರಿಸು, ತುಂಡುಮಾಡು ೬ ನಾಶಗೊಳಿಸು, ಧ್ವಂಸ ಮಾಡು

  ಹಣಿಗು ಎಸಕಪದ

   (<ದೇ. ಪಣುಂಕು) ೧ ಬಾಗು, ಮಣಿ ೨ ಹಿಂಜರಿ, ಹಿಂದೆಗೆ

  ಹಣಿಗೆ ಹೆಸರುಪದ

   (<ದೇ. ಪಣಿಗೆ) ಬಾಚುವ, ಸಾಧನ, ಬಾಚಣಿಗೆ

  ಹಣಿಸು ಎಸಕಪದ

   (<ದೇ. ಪನಿಸು) ಸುರಿ, ಎರೆ, ಹನಿ ಹನಿಯಾಗಿಸು

  ಹಣುಂಗು ಎಸಕಪದ

   (<ದೇ. ಪಣುಂಕು) ಅಡಗಿಕೊಂಡು ನಿರೀಕ್ಷಿಸು, ಹೊಂಚು ಹಾಕು

  ಹಣೆ ಹೆಸರುಪದ

   (<ಸಂ. ಫಣಾ) ೧ ನೊಸಲು, ಲಲಾಟ ೨ ಕಾಡು ಮೃಗಗಳು ಮಲಗುವ ಸ್ಥಳ, ಮೃಗಗಳ ಹಕ್ಕೆ ೩ ನೀರನ್ನು ಎತ್ತುವ ಸಾಧನ, ಏತ ೪ ಸಾಣೆ ಹಿಡಿಯುವ ಕಲ್ಲು, ಮಸೆಗಲ್ಲು

ಈ ತಿಂಗಳ ನಿಘಂಟು ಬಳಕೆ : 12878