ನಿಮ್ಮದೇ ನಿಘಂಟು

 

ಇದು ಅಂತರ್ಜಾಲ ನಿಘಂಟು ಬಳಕೆದಾರರೇ ಕಟ್ಟಿ ಬೆಳಸುತ್ತಿರುವ ನಿಘಂಟು. ಹೊಸಪದಗಳನ್ನು ಸೇರಿಸುವಾಗ ಕೆಳಗಿನ ಸೂಚನೆಗಳನ್ನು ಪಾಲಿಸಿ. ಈ ಅಂತರಜಾಲ ನಿಘಂಟನ್ನು ಬೆಳೆಸಲು ಸಹಕರಿಸಿ.

  • ಈ ನಿಘಂಟಿಗೆ ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಪದಗಳು ಅಥವಾ ನೀವೇ ಕಟ್ಟಿದ ಹೊಸಪದವನ್ನು ಸೇರಿಸಬಹುದು. ಹೊಸಪದ ಉದಾಹರಣೆ: email: ಮಿಂಚೆ, ಮಿನ್ನಂಚೆ, ವಿದ್ಯುದೋಲೆ.
    ಪದವನ್ನು ಸೇರಿಸುವ ಮೊದಲು ಅದು ಬರಹ ಅಂತರಜಾಲ ನಿಘಂಟಿನಲ್ಲಿ ಈಗಾಗಲೇ ಇದೆಯಾ ಒಮ್ಮೆ ಪರೀಕ್ಷಿಸಿ. ಈಗಾಗಲೇ ಇರುವ ಪದಗಳನ್ನು ಮತ್ತೊಮ್ಮೆ ಸೇರಿಸುವುದು ಬೇಡ.
  • ಪದ/ಪದಪುಂಜ ಫೀಲ್ಡ್ ಕನ್ನಡ ಅಥವಾ ಇಂಗ್ಲಿಶ್ ನಲ್ಲಿರಬೇಕು. ಅರ್ಥ(ಗಳು)/ವಿವರಣೆ ಫೀಲ್ಡ್ ಕನ್ನಡ ಮತ್ತು ಇಂಗ್ಲಿಶ್ ನಲ್ಲಿರಬಹುದು. ಪದದ ಅರ್ಥವನ್ನು ಕೊಡುವಾಗ, ಮುದ್ರಿತ ನಿಘಂಟುವಿನಲ್ಲಿ ಕೊಡುವಂತೆ ಅರ್ಥ(ಗಳು), ಶಬ್ದ ವ್ಯುತ್ಪತ್ತಿ, ವಾಕ್ಯದಲ್ಲಿ ಪ್ರಯೋಗ, ಇತ್ಯಾದಿ... ಸಾಧ್ಯವಾದಷ್ಟು ವಿವರಗಳನ್ನು ಕೊಡಿ. ಆಧಾರ ಫೀಲ್ಡ್ ನಲ್ಲಿ ಯಾವ ಮುದ್ರಿತ ನಿಘಂಟು/ಪುಸ್ತಕದಲ್ಲಿ ಪದ/ಪದಪುಂಜ ಬಳಕೆಯಾಗಿದೆ ತಿಳಿಸಿ. ನೀವೇ ಕಟ್ಟಿದ ಪದವಾಗಿದ್ದರೆ ಹೊಸಪದ ಎಂದು ಬರೆಯಿರಿ. ಆಡುನುಡಿಯ ಪದವಾಗಿದ್ದರೆ ಆಡುನುಡಿ ಎಂದು ಬರೆಯಿರಿ.
  • ಸಾಮಾನ್ಯ ಪದ-ಅರ್ಥಗಳು ಮಾತ್ರ ಅಲ್ಲ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ವಾಣಿಜ್ಯ, ತತ್ವಶಾಸ್ತ್ರ... ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಪದ/ಪದಪುಂಜ ಗಳನ್ನೂ ಸೇರಿಸಿ.