ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು

  ಸ್ವಂತ ಹೆಸರುಪದ

   (<ಸಂ. ಸ್ವತಃ) ೧ ತನ್ನದೇ ಆದುದು, ಖಾಸಾ ೨ ಖುದ್ದು, ಮುದ್ದಾಂ

  ಸ್ವಂತ ಪರಿಚೆಪದ

   (<ಸಂ. ಸ್ವತಃ) ಒಬ್ಬ ವ್ಯಕ್ತಿ, ವಸ್ತು ಯಾ ಒಂದು ಸಂಸ್ಥೆಗೆ ಸೇರಿದ, ಖಾಸಗಿಯಾದ, ವೈಯಕ್ತಿಕ

  ಸ್ವಂತಿಕೆ ಹೆಸರುಪದ

   (<ಸ್ವಂತ + ಇಕೆ) ತನ್ನದೇ ಆದ ವಿಶಿಷ್ಟತೆ, ತನ್ನತನ

  ಸ್ವಕಪೋಲಕಲ್ಪನೆ ಹೆಸರುಪದ

   (ಸಂ) ತನ್ನದೇ ಆದಊಹೆ

  ಸ್ವಕಾರ್ಯ ಹೆಸರುಪದ

   (ಸಂ) ತನ್ನದೇ ಆದ ಕೆಲಸ, ಸ್ವಂತ ಕೆಲಸ

  ಸ್ವಕೀಯ ಹೆಸರುಪದ

   (ಸಂ) ೧ ತನ್ನದೇ ಆದುದು, ಸ್ವಂತವಾದುದು ೨ ತನಗೆ ಸಂಬಂಧಿಸಿದ ವ್ಯಕ್ತಿ, ಬಂಧು ೩ ತನ್ನ ಸ್ವಂತ ಕುಟುಂಬದ ವ್ಯಕ್ತಿ

  ಸ್ವಕೀಯ ಪರಿಚೆಪದ

   (ಸಂ) ತನಗೆ ಸಂಬಂಧಿಸಿದ, ಸ್ವಂತದ

  ಸ್ವಗತ ಹೆಸರುಪದ

   (ಸಂ) ೧ ತನ್ನಲ್ಲಿರುವುದು, ಅಂತರಂಗದಲ್ಲಿರುವುದು ೨ ತನಗೆ ತಾನೇ ಮಾತನಾಡಿಕೊಳ್ಳುವುದು, ಆತ್ಮಗತ

  ಸ್ವಗತ ಪರಿಚೆಪದ

   ತನ್ನಲ್ಲಿರುವ; (ಸಂ) ೧ ತನ್ನ, ಸ್ವಂತವಾದ ೨ ಒಳಗೊಂಡ, ಅಂತ ರ್ಗತವಾದ

  ಸ್ವಚ್ಛ ಹೆಸರುಪದ

   (ಸಂ) ನಿರ್ಮಲವಾದುದು, ಪರಿಶುದ್ಧವಾದುದು

  ಸ್ವಚ್ಛ ಪರಿಚೆಪದ

   (ಸಂ) ೧ ನಿರ್ಮಲವಾದ, ಪರಿಶುದ್ಧವಾದ ೨ ದೋಷರಹಿತವಾದ, ನಿಷ್ಕಳಂಕವಾದ

  ಸ್ವಚ್ಛ ಅವ್ಯಯ

   (ಸಂ) ಸ್ಪಷ್ಟವಾಗಿ, ಸ್ಫುಟವಾಗಿ

  ಸ್ವಚ್ಛಂದ ಹೆಸರುಪದ

   (ಸಂ) ೧ ಕಟ್ಟುಪಾಡಿಲ್ಲದಿರುವಿಕೆ, ಮನಸ್ಸು ಬಂದಂತೆ ನಡೆದುಕೊಳ್ಳುವಿಕೆ, ಸ್ವೇಚ್ಛೆ ೨ ಮುಕ್ತವಾದುದು, ಐಚ್ಛಿಕವಾದುದು ೩ ಬೇರೆ ಯಾರಿಗೂ ಅಧೀನವಲ್ಲದವನು, ಸ್ವತಂತ್ರವಾಗಿರುವವನು

  ಸ್ವಚ್ಛತೆ ಹೆಸರುಪದ

   (ಸಂ) ಪರಿಶುದ್ಧವಾಗಿರುವಿಕೆ, ನೈರ್ಮಲ್ಯ

  ಸ್ವಜನಪಕ್ಷಪಾತ ಹೆಸರುಪದ

   (ಸಂ) ತನ್ನ ಜಾತಿಗೆ ಯಾ ತನಗೆ ಸಂಬಂಧಿಸಿದವರ ಬಗ್ಗೆ ಒಲವು ತೋರಿಸುವುದು, ಪಕ್ಷಪಾತ ಮಾಡುವುದು

  ಸ್ವತಂತ್ರ ಹೆಸರುಪದ

   (ಸಂ) ೧ ಯಾರ ಅಧಿಕಾರಕ್ಕೂ ಒಳಪಡದಿರುವಿಕೆ, ಅನಿರ್ಬಂಧತೆ ೨ ನಿರ್ಬಂಧವಿಲ್ಲದವನು, ಸ್ವಾತಂತ್ರ್ಯವನ್ನು ಹೊಂದಿರುವವನು

  ಸ್ವತಂತ್ರ ಪರಿಚೆಪದ

   (ಸಂ) ೧ ಪರಾಧೀನವಲ್ಲದ, ಸ್ವಾವಲಂಬಿಯಾದ ೨ ಸ್ವಚ್ಛಂದ ವೃತ್ತಿಯ, ಸ್ವೇಚ್ಛೆಯಿಂದ ಕೂಡಿದ

  ಸ್ವತಃ ಅವ್ಯಯ

   (ಸಂ) ತಾನೇ, ಖುದ್ದಾಗಿ

  ಸ್ವತಃಸಿದ್ಧ ಹೆಸರುಪದ

   = ಸ್ವಯಂವ್ಯಕ್ತವಾದುದು

  ಸ್ವತ್ತು ಹೆಸರುಪದ

   (<ಸಂ. ಸ್ವವತ್) ಸ್ವಂತ-ಆಸ್ತಿ, ಸಂಪತ್ತು

ಈ ತಿಂಗಳ ನಿಘಂಟು ಬಳಕೆ : 38746