ಅನಕೃ ಮನೆ ‘ಅನ್ನಪೂರ್ಣ’ ಸ್ಮಾರಕವಾಗಿ ಪರಿವರ್ತನೆ!


ಉದಯವಾಣಿ, ಜೂನ್ ೧೬ ೨೦೦೬:

ಸ್ಮಾರಕವಾಗಲಿರುವ ಅನಕೃ ನಿವಾಸ

ಬೆಂಗಳೂರು, ಜೂ. ೧೫: ಕಾದಂಬರಿ ಲೋಕದ ಸಾರ್ವಭೌಮ ಅ.ನ. ಕೃಷ್ಣರಾವ್ (ಅನಕೃ) ಅವರ ನಿವಾಸ ‘ಅನ್ನಪೂರ್ಣ’ವನ್ನು ಉಳಿಸಿಕೊಂಡು ಸ್ಮಾರಕ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನ ವಿಶ್ವೇಶ್ವರಪುರದಲ್ಲಿರುವ ಈ ಮನೆಯನ್ನು ಬೇರೆಯವರು ಕೊಂಡಿದ್ದರೂ ಸಹ ಅದರ ಮಾಲೀಕರಿಗೆ ಹಣ ವಾಪಸು ಮಾಡಿ ಮೂಲ ಮನೆಯನ್ನು ಉಳಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುವರ್ಣ ಕರ್ನಾಟಕ ಕಾರ್ಯಾ ಲಯದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಏರ್ಪಡಿಸಿದ್ದ ಮುಖ್ಯಮಂತ್ರಿ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಂ, ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ್ ಹಾಗೂ ಇತರರು ಅನಕೃ ಅವರ ಮನೆ ಬೇರೆಯವರಿಗೆ ಪರಭಾರೆಯಾಗಿರುವ ಸಂಗತಿ ತಿಳಿಸಿದಾಗ ಕೂಡಲೇ ಸ್ಪಂದಿಸಿ ಸ್ಮಾರಕ ಮಾಡುವುದಾಗಿ ಘೋಷಿಸಿದರು. ಬೆಂಗಳೂರು

ಮಹಾನಗರಪಾಲಿಕೆಯ ಆಯುಕ್ತರಿಗೆ ಈಗಲೇ ಅನಕೃ ಅವರ ಮನೆಯನ್ನು ಕೊಂಡಿರುವವರು ಕೆಡವಲು ಆರಂಭಿಸಿದ್ದರೆ ಅದನ್ನು ತಡೆಯುವಂತೆ ಆದೇಶ ನೀಡಲಾಗುವುದು. ಆ ಮನೆಯನ್ನು ಸರ್ಕಾರ ವಾಪಸು ಕೊಂಡು ಮೂಲವನ್ನು ಉಳಿಸಿ ಸ್ಮಾರಕ ಮಾಡಲಾಗುವುದು ಎಂದರು.

ವಿಶ್ವೇಶ್ವರಪುರದಲ್ಲಿರುವ ಈ ಮನೆ ಸುಮಾರು ೭೦ ವರ್ಷ ಹಳೆಯದಾಗಿದೆ. ಕೆಂಪು ಹೆಂಚಿನ ವಿಶಿಷ್ಟ ವಾಸ್ತುಶಿಲ್ಪದಿಂದ ಕೂಡಿದ ಮನೆ ಇದು. ಮನೆಯ ಒಳಗಡೆಯೂ ವಿಶೇಷ ವಿನ್ಯಾಸಗಳನ್ನು ರೂಪಿಸಿರುವುದು ಕಾದಂಬರಿಕಾರರ ಕಲಾಸಕ್ತಿಗೆ ಸಾಕ್ಷಿ. ಅಣ್ಣತಮ್ಮಂದಿರಾದ ಎ.ಎನ್. ರಾಮರಾವ್ ಮತ್ತು ಅ.ನ. ಕೃಷ್ಣರಾವ್ ಅವರಿಗೆ ಸೇರಿದ ಈ ಮನೆಯ ಒಂದು ಭಾಗದಲ್ಲಿ ರಾಮರಾಮ್ ಅವರ ಮಕ್ಕಳು ಇನ್ನೂ ವಾಸವಾಗಿದ್ದಾರೆ. ಅನಕೃ ಅವರ ಮಕ್ಕಳು ಈ ಮನೆಯನ್ನು ನರಸಿಂಹಶೆಟ್ಟಿ ಎಂಬ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಅವರು ಮೊದಲು ಚಪ್ಪಲಿ ಗೋದಾಮು ಮಾಡಿಕೊಂಡಿದ್ದರು. ಆದರೆ ಮಾಧ್ಯಮಗಳಲ್ಲಿ ವರದಿಗಳು ಬಂದು ಆ ನಂತರ ವಿಧಾನಮಂಡಲದಲ್ಲಿ ಪ್ರತಿಧ್ವನಿಸಿದ ನಂತರ ಚಪ್ಪಲಿ ಅಂಗಡಿ ಫಲಕ ತೆಗೆದು ಹಾಕಿ ಅಲ್ಲಿ ಮೈತ್ರಿ ನ್ಯೂಸ್ ಏಜೆನ್ಸಿ ಎಂಬ ಫಲಕ ಹಾಕಿದ್ದಾರೆ. ದೊಡ್ಡ ಕಾಂಪೌಂಡ್‌ನಲ್ಲಿದ್ದ ಸಂಪಿಗೆ ಮರ, ತೆಂಗಿನಮರಗಳನ್ನು ಈಗಾಗಲೇ ಕಿತ್ತು ಹಾಕಲಾಗಿದೆ. ಅನಕೃ ಪ್ರತಿಷ್ಠಾನದಿಂದ ಬೇರೆಡೆ ನಿವೇಶನ ನೀಡುವಂತೆ ಸರ್ಕಾರವನ್ನು ಕೋರುತ್ತೇವೆ ಎಂಬುದು ಅನಕೃ ಅವರ ಮಕ್ಕಳ ವಾದವಾಗಿತ್ತು ಎನ್ನಲಾಗಿದೆ. ಆದರೆ ಅನಕೃ ಅವರ ಅಭಿಮಾನಿಗಳು ಹಾಗೂ ಕನ್ನಡಪರ ಹೋರಾಟಗಾರರು ಮೂಲ ಮನೆಯನ್ನು ಉಳಿಸಿಕೊಳ್ಳಬೇಕು. ಅಲ್ಲಿಯೇ ಸ್ಮಾರಕ ಮಾಡಬೇಕು ಎಂಬ ಒತ್ತಾಯವನ್ನು ಬಹಳಷ್ಟು ಕಾಲದಿಂದ ಮಾಡುತ್ತಿದ್ದದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ದಟ್ಸ್ ಕನ್ನಡ ವಾರ್ತೆ, ಜೂನ್ ೧೬ ೨೦೦೬:

ಚಪ್ಪಲಿ ಗೋದಾಮಾಗಿದ್ದ ಅನಕೃ ಮನೆ ಇನ್ಮುಂದೆ ಸ್ಮಾರಕ

ಬೆಂಗಳೂರು : ಕಾದಂಬರಿ ಲೋಕದ ಧ್ರುವತಾರೆ ಅ.ನ. ಕೃಷ್ಣರಾವ್(ಅನಕೃ) ಅವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕನ್ನಡ ಭವನದಲ್ಲಿ ಸುವರ್ಣ ಕರ್ನಾಟಕ ಕಾರ್ಯಾಲಯದ ಉದ್ಘಾಟನಾ ಸಮಾರಂಭದ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ, ಅವರು ಮಾತನಾಡುತ್ತಿದ್ದರು.

ಬೆಂಗಳೂರಿನ ವಿಶ್ವೇಶ್ವರ ಪುರದಲ್ಲಿರುವ ಅನಕೃ ನಿವಾಸ ‘ಅನ್ನಪೂರ್ಣ’, ಪ್ರಸ್ತುತ ಚಪ್ಪಲಿ ಗೋದಾಮು ಆಗಿ ಪರಿವರ್ತನೆಯಾಗಿದೆ. ಖಾಸಗಿಯವರು ಈ ಮನೆಯನ್ನು ಸದ್ಯದಲ್ಲಿಯೇ ನೆಲಸಮ ಮಾಡಿ, ವಾಣಿಜ್ಯ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ಅಂಶಗಳು ನನ್ನ ಗಮನಕ್ಕೆ ಬಂದಿವೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಅನಕೃ ನಿವಾಸವನ್ನು ಮತ್ತೆ ಅದರ ಮಾಲೀಕರಿಂದ ಸರ್ಕಾರ ಖರೀದಿಸಿ, ಸ್ಮಾರಕವಾಗಿ ಪರಿವರ್ತಿಸಲಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಅನಕೃ ನಿವಾಸ ನೆಲಸಮವಾಗುವ ಮುನ್ನ, ಕುಮಾರಸ್ವಾಮಿ ಭರವಸೆ ಕಾರ್ಯರೂಪಕ್ಕೆ ಬರಲಿ.

The Hindu, 16/06/2006:

BANGALORE: Chief Minister H.D. Kumaraswamy, who holds the Kannada and Culture portfolio, said on Thursday that the Kannada Development Authority (KDA) Act would be amended to empower the authority to prosecute officials who failed to use Kannada in administration.

Inaugurating an office of the special unit which will organise the Survarna Karnataka celebrations (to mark 50 years of the formation of the State), he said he had asked the new KDA Chairman, Siddalingaiah, to tour border districts and enquire about the problems faced by Kannadigas and how to solve them. The Chief Minister said the KDA would be strengthened so that it could ensure that Kannada was used in administration.

He directed Bangalore Mahanagara Palike Commissioner K. Jairaj to inspect the building at Visvesvarapura where Kannada writer late A.N. Krishna Rao lived, and stop its demolition. The Government would purchase the property and build a memorial to the writer, he added. Speaking at an interaction, Mr. Kumaraswamy said maintenance of Puttanna Kanagal theatre at Jayanagar would be taken up. He told Y.K. Muddukrishna of the Karnataka Sugama Sangeeta Academy that a tune for the "naadageethe" (State anthem) would be chosen.

He said children in government schools would be taught both English and Kannada. The Chief Minister told Ramesh, film actor, that short films on the achievements of the State would be made. G.S. Shivarudrappa, poet, sought the implementation of the Sarojini Mahishi and D.M. Nanjundappa committee reports.